ಬಿದಿರೊಂದು ಭ್ರಹ್ಮದೇವನಿಗೆ ಎದುರಾಗಿ ಕೇಳಿತಂತೆ "ಬೇಕಿತ್ತೆ ನಿನಗೆ ಸೃಷ್ಟಿಯೊಳಗೆ ನನ್ನದೊಂದು ಪಾತ್ರ? ಹೂವಿಲ್ಲ, ಹಣ್ಣಿಲ್ಲ,
ನಿತ್ಯ ಸತ್ಯ ೨
ದಣಿದು ಬಂದವರಿಗೆ ನೆರಳು ಕೂಡ ನೀಡಲಾಗುವುದಿಲ್ಲ".
ಅದಕ್ಕೆ ಬ್ರಹ್ಮದೇವ ನಕ್ಕು ನುಡಿದನಂತೆ, "ಯಾಕೆ ಸಾಧ್ಯವಿಲ್ಲ? ಮನಸ್ಸು ಮಾಡಿ ನೋಡೊಮ್ಮೆ"
ಬಿದಿರು ಹಠ ಹಿಡಿದು ಬೆಳೆಯಿತಂತೆ, ಕೃಷ್ಣನ ಕೈಯ್ಯಲ್ಲಿನ ಕೊಳಲಾಯಿತಂತೆ...., ಮಕ್ಕಳ ತೂಗುವ ತೊಟ್ಟಿಲಾಯಿತಂತೆ...
ಸುಮಂಗಲಿಯರಿಗೆ ಬಾಗಿನ ಕೊಡುವ ಮರವಾಯಿತಂತೆ...., ಬಡವನ ಗುಡಿಸಲಿಗೆ ನೆರಳಾಯಿತಂತೆ.... ಬಟ್ಟೆ ಒಣಗಿಸುವ ಕೋಲಾಯಿತಂತೆ...., ಬಿದಿರಿನ ಬುಟ್ಟಿ ಆಯಿತಂತೆ....,
ಕಡೆಗೆ ಶವ ಎತ್ತಲೂ ಆಧಾರವಾಯಿತಂತೆ....
ಮನುಷ್ಯನಿಗೆ ಗುಟ್ಟು ಹೇಳಿತಂತೆ, "ನನ್ನಿಂದೇನಾಗದು ಅಂತ ಕೈ ಚೆಲ್ಲದಿರು ಮನುಜ, ಮನಸ್ಸು ಮಾಡಿ ನೋಡೊಮ್ಮೆ ಅಂತಾ"...
🙏🏻
Courtesy: WhatsApp
No comments:
Post a Comment