*ಚಪ್ಪಲಿ ಹೊರಗೆ ಬಿಟ್ಟು ಸಿನಿಮಾ ನೋಡಿದ ಪ್ರೇಕ್ಷಕರು* – ತಪ್ಪದೇ ಓದಿ
ಅಣ್ಣಾವ್ರು ನೂರಾರು ಸಿನಿಮಾದಲ್ಲಿ ನಟಿಸಿದರೂ ತಾವು ಅಭಿನಯಿಸಿದ ಸಿನಿಮಾ ನೋಡಿದ್ದು ಕಡಿಮೆ. ಅದಕ್ಕೆ ನೂರು ಕಾರಣ ಹಾಗಾಗಿದ್ದು ಮಂತ್ರಾಲಯ ಮಹಾತ್ಮೆ ಸಿನಿಮಾ ವಿಚಾರದಲ್ಲಿ . .ಈ ಸಿನಿಮಾದಲ್ಲಿ ರಾಜ್ ಅಭಿನಯಿಸುತ್ತಾರೆ ಎಂದು ಸುದ್ದಿ ಬಂದಾಗಲೇ ಒಡುಕು ದನಿ ಒ೦ದು ತಲೆ ಎತ್ತಿತ್ತು. ಪತ್ರಿಕೆಯೊಂದರಲ್ಲಿ ಒಂದು ಬರಹ ಪ್ರಕಟವಾಯಿತು. ಅದರಲ್ಲಿ *ರಾಜ್ ಕರ್ನಾಟಕದ ಅಷ್ಟೇ ಏಕೇ ಇಡೀ ಭಾರತದ ಸಾಧು ಸಂತರ ಪಾತ್ರ ನಿರ್ವಹಿಸಬಹುದು*. .ಆದರೆ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ವಿಚಾರವೇ ಬೇರೆ ಅದಕ್ಕೊಂದು.. ವಿದ್ವತ್ ಪ್ರತಿಭೆ ಎಲ್ಲ ಬೇಕಾಗುತ್ತದೆ ಅಂತಹ ಅರ್ಹತೆ ಇವರಿಗಿಲ್ಲ"ಎಂದಿತ್ತು. ಈ ವಿಚಾರವನ್ನು ಚಿತ್ರದ ಚಿತ್ರಕಥೆ ಬರೆದಿದ್ದ ಜಿ.ವಿ.. ಅಯ್ಯರ್ ಅವರಿಗೆ ಗೊತ್ತಾಗಿ ಅವರು ನಕ್ಕುಬಿಟ್ಟರು.
ಏಕೆಂದರೆ ಬುದ್ಧಿವಂತರಾದ ಅವರು ಈ ಸಮಸ್ಯೆ ಪರಿಹಾರಕ್ಕೆ ಒಂದು ಉಪಾಯ ಕಂಡು ಹಿಡಿದರು. ಚಿತ್ರದಲ್ಲಿ ಅಭಿನಯಿಸಬಹುದಾದ ಎಲ್ಲ ನಾಯಕರ ಹೆಸರುಗಳನ್ನು ಒಂದೊಂದು ಚೀಟಿಯಲ್ಲಿ ಬರೆದು ಅವುಗಳನ್ನು *ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ* ಮುಂದೆ ಇಡೋದು… ಅದರಲ್ಲಿ ಮಗುವಿನ ಕೈಯಿಂದ ಒಂದು ಚೀಟಿ ಎತ್ತಿಸೋದು..ಅದರಲ್ಲಿ ಯಾರು ಹೆಸರು ಬರುತ್ತೋ ಅವರೇ ಈ ಚಿತ್ರದ ನಾಯಕರು .ಹಾಗೆ ಮಾಡಿದಾಗ ರಾಜ್ ರ .ಹೆಸರೇ ಆಯ್ಕೆ ಆಯಿತು.. ಇಂಥಾ ಅವಕಾಶ ಬಿಡಬಾರದು..ಈ ಚಿತ್ರದಲ್ಲಿ ಅಭಿನಯಿಸೇ ತೀರಬೇಕು ಅಂದುಕೊಂಡರು ರಾಜ್..ಇದಕ್ಕಾಗಿ ಚಿತ್ರ ಮುಗಿದು ಬಿಡುಗಡೆ ಆಗೋವರೆಗೂ ಮಾಂಸಾಹಾರ ತ್ಯಜಿಸಿ..ಬರಿಗಾಲಲ್ಲಿದ್ದರು ರಾಜ್..
ಸಿನಿಮಾ ಡಬ್ಬಿಂಗ್ ಮಾಡುವಾಗ ಕೂಡ ಅವರು ತಾವು ಅಭಿನಯಿಸಿದ ಭಾಗಗಳನ್ನು ನೋಡಲಿಲ್ಲ. ಶೂಟಿಂಗ್ ಸಮಯದಲ್ಲಿ ಮುದ್ರಿಸಿ ಕೊಂಡಿದ್ದ ಸಂಭಾಷಣೆ ಕೇಳಿಸಿಕೊಂಡು ಡಬ್ಬಿಂಗ್ ಮಾಡಿದ್ದರು ರಾಜ್..ಆಗ ಚಿತ್ರ ತಯಾರಾಯಿತು...ನಂತರ ಒಂದು ಸಲ ಮಂತ್ರಾಲಯಕ್ಕೆ ಹೋಗಿ ಬಂದು ತಾವೇ ಅಭಿನಯಿಸಿ ಸಿನಿಮಾ ನೋಡೋದು ಅಂದುಕೊಂಡರು.ಹೀಗೆ ಬಿಡುಗಡೆಯಾದ ಈ ಚಿತ್ರ ಭರ್ಜರಿಯಾಗಿ ಯಶಸ್ವಿಯಾಯಿತು.ಅವರು ಯಾವತ್ತೂ ಯಾರಿಗೂ ತಮ್ಮ ಅಭಿನಯದ ಸಿನಿಮಾ ನೋಡಿ ಎಂದು ಹೇಳಿದವರಲ್ಲ ಆದರೆ ಪರಿಚಿತರಿಗೆ.. ಸಮೀಪದ ಜನಕ್ಕೆ *ಮಂತ್ರಾಲಯ ಮಹಾತ್ಮೆ* ಸಿನಿಮಾ ನೋಡಿ ಅ೦ತೆ ಹೇಳಿದ್ದುಂಟು.
ಇನ್ನೊಂದು ವಿಶೇಷವೆಂದರೆ ಡಾ.ರಾಜ್ ಕುಮಾರ್ ಅವರು *ಮಂತ್ರಾಲಯ ಮಹಾತ್ಮೆ* ಚಿತ್ರದಲ್ಲಿ ಸಂಸ್ಕೃತದಲ್ಲಿ ಉಚ್ಚರಿಸಬೇಕಿದ್ದನ್ನು ಪೂಜೆ ಪುನಸ್ಕಾರ ಮಾಡಬೇಕಾದಾಗ ಎಲ್ಲಾ ಸರಿ ಇದೆಯೋ ಇಲ್ಲವೋ ಎಂದು ತಿಳಿದುಕೊಳ್ಳಲು ಹಂಬಲಿಸುತ್ತಿದ್ದರು.
ಒಂದು ಪಕ್ಷ ಉಚ್ಚಾರ ತಪ್ಪಿದರೆ ನೋಡುವವರು ಎನಂತಾರೆ ಅನ್ನುವ ಭೀತಿ. ಹಾಗಾಗಿ ಅವರು ನಿರ್ದೇಶಕ ಭಗವಾನ್ ಅವರಿಗೆ...*ರಾಘವೇಂದ್ರ ಸ್ವಾಮಿ* ದೇವಸ್ಥಾನದಲ್ಲಿ ಪೂಜೆ ಮಾಡುವ ಅರ್ಚಕರನ್ನು ಕರೆಸಿ ಬಿಡಿ ಎಂದು ಪಟ್ಟು ಹಿಡಿದರು. ಹಾಗೂ ಉಡುಪಿಯ ಮಠಕ್ಕೆ ಹೋಗಿ ಅಲ್ಲಿ ಪೇಜಾವರರನ್ನು ಭೇಟಿ ಮಾಡಿ ವಿಷಯ ತಿಳಿಸಿದರು.ಆಗ ಶ್ರೀಗಳು “ಕುಂಜರ್ “ ಅನ್ನುವ ಅರ್ಚಕರನ್ನು ಈ ಚಿತ್ರದ ಶೂಟಿಂಗ್ ಮುಗಿಯುವವರೆಗೂ ಜೊತೆಯಲ್ಲೇ ಇರಬೇಕು ಅಂತ ಹೇಳಿ ಕಳಿಸಿಕೊಟ್ಟರು.
ಶ್ರೀ ಕುಂಜರ್ ಅವರು..ರಾಜ್ ರಿಗೆ ...
ಭಕ್ತಾದಿಗಳಿಗೆ ಅಕ್ಷತೆ ಕೊಡುವ ಶೈಲಿ ..
ತೀರ್ಥ ಕೊಡುವ ರೀತಿ..
ಜಪ ಮಾಡುವುದು ..ತಲ್ಲೀನರಾಗುವ ಪರಿ
ಪೂಜೆ ಮಾಡೋದು.. ಕಚ್ಚೆ ಹಾಕೋದು
ಶಲ್ಯ ಪಂಚ ಹೊದ್ದುಕೊಳ್ಳೇದು.
ಮೈಗೆ ಗಂಧ ಹೇಗೆ ಹಚ್ಚಿಕೊಳ್ಳಬೇಕು ಅನ್ನುವುದರ ಜೊತೆಗೆ ಇನ್ನೂ ಅನೇಕ ಧಾರ್ಮಿಕ ವಿಚಾರಗಳನ್ನು ರಾಜ್ ರಿಗೆ ವಿವರವಾಗಿ ಹೇಳಿಕೊಟ್ಟರು ..*ಶ್ರೀಗಳು* ಹೇಳದಂತೆ ರಾಜ್ ಅವರು ಚಾಚೂ ತಪ್ಪದಂತೆ ನಡೆದುಕೊಂಡರು..
ಈ ಚಿತ್ರ ಬಿಡುಗಡೆಯಾದಾಗ” ಸ್ಟೇಟ್ಸ್ ಚಿತ್ರಮಂದಿರದಲ್ಲಿ ಥಿಯೇಟರ್ ಹೊರಗಡೆ ರಾಶಿ ರಾಶಿ ಚಪ್ಪಲಿಗಳು ಬಿದ್ದಿದ್ದವು.! ನೋಡಿದರೆ ಪ್ರೇಕ್ಷಕರೆಲ್ಲರೂ *ರಾಜಕುಮಾರರನ್ನು ರಾಘವೇಂದ್ರ ಸ್ವಾಮಿ ಅಂತ ಭಾವಿಸಿ ಚಪ್ಪಲಿಯನ್ನು ಹೊರೆಗೆ ಬಿಟ್ಟು ಚಿತ್ರವನ್ನು ವೀಕ್ಷಿಸಿದ್ದರು...ಹೀಗಿದೆ *ರಾಯರ* *ಮಹಿಮೆ* ಜೊತೆಗೆ *ಅಣ್ಣಾವ್ರ* *ಅಭಿನಯ*..🙏🙏🙏🙏
No comments:
Post a Comment