Saturday, 3 September 2022

ವಿಷ್ಣು ಸಹಸ್ರನಾಮ ಪಾರಾಯಣದ ಮಹಿಮೆಗಳು ! ವಿಷ್ಣು ಸಹಸ್ರನಾಮ ಸ್ತೋತ್ರ ಏಕೆ ಬೇಕು?

 


ಬೇರೆ ಬೇರೆ ದೇವತೆಯರ ಉಪಾಸನೆಯಿಂದ ಬೇರೆ ಬೇರೆ ಫಲವಿರುವುದು ರೂಢಿ; 

ಉದಾಹರಣೆಗೆ ....


ಬೃಹಸ್ಪತಿ -ಆರಾದನೆಯಿಂದ ಬ್ರಹ್ಮ ವರ್ಚಸ್ಸು.


ಈಶ್ವರನಿಂದ - ವಿದ್ಯೆ ಹಾಗೂ ಒಳ್ಳೆಯ ಮನೋಭಾವ.


ಗೌರೀ ಪೂಜೆಯಿಂದ - ಅನ್ಯೋನ್ಯತೆ ಸುಖ ದಾಂಪತ್ಯ.


ದಕ್ಷ ಪ್ರಜಾಪತಿಗಳ - ಆರಾದನೆಯಿಂದ ಪ್ರಜಾ ಸಂಪತ್ತು ಸತ್ಸಂತಾನ.


ಮಹಾಲಕ್ಷ್ಮೀ ಉಪಾಸನೆಯಿಂದ - ಐಶ್ವರ್ಯ.


ಅಗ್ನಿಯಿಂದ -ತೇಜಸ್ಸು ವಸ್ತುಗಳಿಂದ ಸಂಪತ್ತು


ಅದಿತಿಯಿಂದ - ಅನ್ನಹಾರ ದೇವತೆಗಳಿಂದ - ಸ್ವರ್ಗ ಪ್ರಾಪ್ತಿ.


ವಿಶ್ವ ದೇವತೆಗಳಿಂದ -  ಭೂಸಂಪತ್ತು.


ಅಶ್ವಿನಿ ದೇವತೆಗಳಿಂದ ಆಯುವೃದ್ದಿ.


ಗಂಧರ್ವರಿಂದ ಸ್ಪುರದ್ರೂಪ ಸೌಂದರ್ಯ.


ಊರ್ವಶಿಯಿಂದ - ಸ್ತ್ರೀ ವಿಕಾರ ನಿವೃತ್ತಿ.


ಯಜ್ಞ ದಿಂದ - ಕೀರ್ತಿ.


ಪಿತೃಗಳಿಂದ ಸಂತತಿ ವೃದ್ಧಿ.


ಆದರೆ ಶ್ರೀ ವಿಷ್ಣು ಸಹಸ್ರನಾಮದಿಂದ ಈ ಎಲ್ಲಾ ಸಿದ್ಧಿಗಳೂ ಒಟ್ಟಿಗೇ ಸುಲಭವಾಗಿ ಲಭಿಸುವುದು.


🌹🌹🌹🌹🌹


ಪಾರಾಯಣ ಸಮಯ ಮತ್ತು ಪದ್ಧತಿ.


ಹಬ್ಬ, ವ್ರತ, ಉತ್ಸವಗಳಲ್ಲಿ ಪಾರಾಯಣ ಮಾಡಬಹುದು ಹಾಗೂ ಭೀಷ್ಮಾಷ್ಠಮಿ, ಏಕಾದಶಿ ದಿನಗಳು ಪಾರಾಯಣಕ್ಕೆ ಪ್ರಶಸ್ತವಾದ ದಿನಗಳು.

ಪಾರಾಯಣ ಮಾಡುವಾಗ, ಪೂರ್ವ ಹಾಗೂ ಉತ್ತರಾಭಿಮುಖವಾಗಿ ಕುಳಿತು ಮಾಡಬೇಕು.

ಸಾಮೂಹಿಕವಾಗಿ / ಕುಟುಂಬದವರೆಲ್ಲಾ ಒಟ್ಟಿಗೇ ಕುಳಿತು ಪಾರಾಯಣ ಮಾಡಿದರೆ ಹೆಚ್ಚಿನ ಅನುಗ್ರಹ ಇರುತ್ತದೆ.

ಆತ್ಮಸುಖ, ಯೋಗಕ್ಷೇಮ, ಭಾಗ್ಯ ಸೌಭಾಗ್ಯ, ಧೈರ್ಯ, ಆತ್ಮ ಸ್ಥೈರ್ಯ, ಸ್ಮರಣ ಶಕ್ತಿ, ಸ್ಪುರಣ ಶಕ್ತಿ, ಮೇಧಾಶಕ್ತಿ ಹಾಗೂ ಕೀರ್ತಿಗಳು ಪ್ರಾಪ್ತಿಯಾಗುವುವು.


ವಿಷ್ಣು ಸಹಸ್ರನಾಮ ಸ್ತೋತ್ರ ಯಾರು ಹೇಳುವುರೋ, ಯಾರು ಕೇಳುವರೋ ಅವರಿಗೆ ಇಹ-ಪರದಲ್ಲಿ ಅಶುಭ, ಅಮಂಗಳ ಎಂಬುದೇ ಇಲ್ಲ. ಆರೋಗ್ಯ, ಕಾಂತಿ, ಬಲ, ಸೌಂದರ್ಯ ಹೆಚ್ಚುತ್ತದೆ ಅಃತಕರಣ ಶುದ್ದವಾಗುತ್ತದೆ. ಶೀಘ್ರದಲ್ಲಿ ಎಲ್ಲನೋವು , ಸಂಕಟದಿಂದ ಪಾರಾಗುತ್ತಾರೆ. ಶಾಂತಿ, ಸಮಾಧಾನ,  ನೆಮ್ಮದಿ ಲಭಿಸುತ್ತವೆ. ಒಂದೊಂದು ನಾಮಕ್ಕೂ ನೂರು-  ನೂರು ಅರ್ಥಗಳು. ಭಗವಂತನ ಸಾವಿರ ರೂಪಗಳ ಸಾವಿರ ನಾಮಗಳೇ ವಿಷ್ಣು ಸಹಸ್ರನಾಮ.


ಮುಂದುವರಿಯುವುದು .....

 

 ಕೃಷ್ಣಾರ್ಪಣಮಸ್ತು

(ಸತ್ಸಂಗ ಸಂಗ್ರಹ)

No comments:

Post a Comment